ನೂರು ಮೌನಗಳು ಮಾತಾಗಲಾರದೆ ಬಿಳಿ ಹಾಳೆಯನ್ನು ಆವರಿಸಿವೆ... ಮನವನ್ನು ಹಗುರಾಗಿಸಿವೆ...ಅಂದಣದಲ್ಲಿ ಪಯಣಿಸಿವೆ...
ಗುರುವಾರ, ಜೂನ್ 30, 2011
ಶುಕ್ರವಾರ, ಜೂನ್ 10, 2011
nimisha nimishaku
ನಿಮಿಷ ನಿಮಿಶಕು .......
ಹೂವರಳಿದಾ ಘಮವು
ಪ್ರತಿಯುಸಿರ ತಾಳದಲಿ
ಜೇನ್ ಗಾನ ಸಂಭ್ರಮದ
ಸವಿ ಬೆರಗು;
ಅಚ್ಚರಿ ಸೊಬಗು...
ನಿಮಿಷ ನಿಮಿಶಕು ಚೈತ್ರ
ನನ್ನೆದೆಯ ಭುವಿಯಲ್ಲಿ
ಚಿಗುರಿ ನಲಿದಿದೆ ಕನಸು
ಸುತ್ತೆಲ್ಲ ಜಾಗದಲಿಹೂವರಳಿದಾ ಘಮವು
ಪ್ರತಿಯುಸಿರ ತಾಳದಲಿ
ಜೇನ್ ಗಾನ ಸಂಭ್ರಮದ
ಸವಿ ಬೆರಗು;
ಅಚ್ಚರಿ ಸೊಬಗು...
ಹೊಸ ಹೆಜ್ಜೆ ಬಾಳಿನಲಿ
ಹಳೆ ಹಕ್ಕಿ ಬಾನಿನಲಿ
ಸಂಭ್ರಮದ ಚಿಲಿಪಿಲಿ ಎಲ್ಲೆಡೆಯಲಿ
ಕುತೂಹಲದ ಸಾಂಗತ್ಯ ಜೊತೆ ಜೊತೆಯಲಿ
ನಿಮಿಷ ನಿಮಿಶಕು ಚೈತ್ರ
ನನ್ನೆದೆಯಲಿ............
ಕಾಡಿರದೆ ಒಂದಿನಿತೂ....???
ಸಂದಿ ಗೊಂದಿಯಲ್ಲೇ ಚಿಗುರಿ ನಲಿವ
ಹಸಿರು,ಹೂವು!
ಪುಟ್ಟ ಮೆಟ್ಟಿಲುಗಳ ಅಪೂರ್ವ ಸ್ವಾಗತ..
ಪ್ರತಿ ಹೆಜ್ಜೆಗೂ ಕುತೂಹಲದ ಇಂಗಿತ!
ಸುತ್ತ ನೋಡಿದರೆ,
ಸರ್ವಾಲಂಕಾರ ಭೂಷಿತೆ ಪೃಥ್ವಿ ದೇವಿ...!
ಕೊಂಚ ಸಾಗಿ ಕತ್ತೆತ್ತಿದರೆ
ವಿರಾಜಮಾನ ಗೊಮ್ಮಟ ಮೂರ್ತಿ !
ಅದೆಷ್ಟೋ ಜನ ಪೂಜಿಸುತ್ತಿದ್ದಾರೆ,
ಬೇಡುತ್ತಿದ್ದಾರೆ, ಭಜಿಸುತ್ತಿದ್ದಾರೆ.....
ನಿಂತಿದ್ದಾನೆ ಈತ ಎಂದಿನಂತೆ
ಮನದಲ್ಲೊಂದು ಗೊಂದಲದ ಸಂತೆ!
ಕಾಡಿರದೆ ಒಂದಿನಿತೂ ಆತನನು
ತಾನೇಕೆ ಹೀಗಾದೆನೆಂಬ ಚಿಂತೆ?...?

ಮಂಗಳವಾರ, ಜೂನ್ 7, 2011
ಬಾರೆ ಬಾರೆಲೇ ನಿ ಬಾರೆ ನನ್ನಯ ಜೊತೆಗೆ
ಹೋಗೋಣ ನಾವು ಬೆಳದಿಂಗಳನ್ಗಳಕೆ
ನಾಚಿಕೆಯ ಪರದೆಯನು ಕಿತ್ತೋಗೆದ ಚಂದಿರನ
ನಾಚಿಸಲು ಹೋಗೋಣ
ಬಾ ಕಲ್ಪನಾ...
ಬಾನಂಗಳದಲ್ಲಿ ಚೆಲ್ಲಿದೆ, ಹರಡಿದೆ
ಬೆಳ್ಳಿ ಲೆಪನದಾ ಹತ್ತಿ ಹಾಸು
ಅಲ್ಲಲ್ಲಿ ಮಿನುಗುವಾ ಉರಗ ನಯನದ ಕಾಂತಿ
ಇನ್ನೇನೋ ನೋಡೋಣ
ಬಾ ಕಲ್ಪನಾ...
ಅಲ್ಲಿ ಇದೆಯಂತೆ,ನಿಶ್ಯಬ್ದ ಗಾನ ಬೀರುವ ಕೊಳಲು
ಮೌನವೀಣೆಯ ಮಿಡಿತ
ಹೃದಯ ಮೃದಂಗ...
ಬಾ ನಾವು ಹೋಗೋಣ ,ಕೇಳೋಣ ಮೆರೆಯೋಣ
ನಮ್ಮನದ ಆಂಗನದ ದಿವ್ಯ ಗಾನ...
ಮಳೆರಾಯನ ಬರುವಿಕೆಗೆ...
ಕೆಲುವರಂಗಿಗೆ ಎಳೆಗಳೆದು ಹೊಗೊತಲಿವೆ !
ಬರಮಾಡಿಕೊಳುತಿಹಳು ಮಳೆರಾಯನಾ....
ಕೆಲುವೊಂದು ಎಳೆ ಚಿಗುರು
ಕೆಲುವೊಂದು ತಿಳಿ ಹಸಿರು
ಕೆಲುವರಂಗಿಗೋ ಬಣ್ಣ ಬಣ್ಣದ ಚಿತ್ತಾರ
ಕೆಲುವರಂಗಿಗೆ ಬೆಂಕಿ ತಗುಲಿದಂತೆ...
ಕೆಲುವರಂಗಿಗೆ ಧೂಳು ಧೂಮಗಳ ಮುಚ್ಚಿಗೆ
ಕೆಲುವರಂಗಿಗೆ ಸೊಂಪು ತಂಪಿನಿಬ್ಬನಿ ಸ್ನಾನಕೆಲುವರಂಗಿಗೆ ಎಳೆಗಳೆದು ಹೊಗೊತಲಿವೆ !
ಕೆಲುವರಂಗಿಗೆ ಚಿತ್ರ ವಿಚಿತ್ರ ಕಾಲ...
ಕೆಲವು ಮುಸ್ಸಂಜೆ ಮುಂಜಾವಿನಲ್ಲೊಮ್ಮೊಮ್ಮೆ ,ಧರಿಸುವವು ಕೆಂಪನೆಯ ಕೆಮ್ಮಡಿಯನು...
ಕೆಲುವರಂಗಿಗೆ ಅತ್ತರದ ಕಂಪಿನಾಲಂಪು
ಕೆಲುವರಂಗಿಯ ಮೇಲೆ ಕೂ ದನಿಯ ಇಂಪು !
ಕೆಲುವರಂಗಿಗೆ ಕೊಳೆವ ಕಾಲ ಭೀತಿ !!!!
ಹಲವರಂಗಿಯ ಮೇಲುಲಿವ ಬಾನಾಡಿಗಳು
ಕೆಲುವರಂಗಿಗೆ ಹೊಲಿಗೆ ಮುಗಿದಿಲ್ಲವಿನ್ನೂ ಎಲ್ಲರಿಗು ದಿರಿಸ ತಾನಿತ್ತಿಹಳು ಮಹಾತಾಯಿ
ಉಟ್ಟಿಹಳು ತಾ ಬಣ್ಣ ಬಣ್ಣದ ಉಡಿಗೆ
ಕೊಂಚ ಸಿಂಗಾರ ಮಿಕ್ಕಿಹುದು ಎಂದು ಬರಮಾಡಿಕೊಳುತಿಹಳು ಮಳೆರಾಯನಾ....
ಸೋಮವಾರ, ಜೂನ್ 6, 2011
ಬೃಂದಾವನ
ನೀಲಿ ಇರುಳಿನ ಮೂಹ ಚಂದ್ರಿಕೆ
ಕನಸ ಕಾವ್ಯದ ಕನ್ನಿಕೆ !
ತಾರೆ ಮೆರುಗಿನ ಹೊಳೆವ ಚೇತನ
ತೃಪ್ತ ಭಾವ ಭವಾನ್ಗನಾ...
ಸೂಕ್ಷ್ಮ ಆಶಯ ಅನುದಿನಾ...
ಭಾಗ್ಯ ದೀಕ್ಷೆಯ ಸೃಷ್ಟಿ ಮಾಯೆಗೆ
ನೇಹ ನೇಗಿಲು ತನು ಮನ...
ಭುವಿಯು ಅಣಿಯಿದೆ ಮುತ್ತ ಪೊಣಿಸಲು
ಮನದ ಮೇಘದ ಸಂಭ್ರಮ...
ನೂರು ನಯನದಿ ನವಿಲ ನರ್ತನ
ಹೊನ್ನ ಕೊರಳಿನ ಹೂಬನ...
ಕೂಗಿ ಕರೆವ ಬೃಂದಾವನ...
ತೂಗಿ ತೊನೆವ ಲತೆ ಭಾವನಾ...ಭುವಿಯಿಹಳು ತಂತಾನೇ!!!
ಮನವೆಲ್ಲ ಬರಿ ನೀಲಿ
ನಿರಾಷೆಯಳಲಿನ ಮೌನ..
ಚಿಗುರ ಕಾಯುತಲಿಹವೋ!
ಮುಸ್ಸಂಜೆ ಬಾನಾಡಿಗಳು
ತಾರೆಗಳು ನಗುತಿಹವು
ಮನಸು ಬಿಚ್ಚಿ.......!
ಎಲ್ಲೆಲ್ಲು ಬರಿ ಬಯಲು
ಅದೆಂತೆಂಥ ಕಲ್ಪನೆಯೋ
ಜಗದ ತುಂಬಾ..ಭುವಿಯಿಹಳು ತಂತಾನೇ
ನಸುನಗುತ ಸೋಜಿಗದೊಡನೆ
ತಿಳಿದಿಹುದಲ್ಲ ಆಕೆಗೆ ಪ್ರತಿ ನಮೂನೆ???!!
ಮನವೆಲ್ಲ ಬರಿ ನೀಲಿ
ನಿರಾಷೆಯಳಲಿನ ಮೌನ..
ಬೆರಳು ಮಾಡಿವೆ ಮೇಲೆ
ಮರಗಳೆಲ್ಲಾ...
ಚಿಗುರ ಕಾಯುತಲಿಹವೋ!
ವರವ ಬೆಡುತಲಿಹವೋ!
ಚಿತ್ರ ವೈಚಿತ್ರ್ಯದ ನೃತ್ಯ ಭಂಗಿ !!ಹೊತ್ತು ತರುವಳು ಹಸಿರ
ಹಸಿವ ನೀಗುವ ಸುಧೆ,
ಮುತ್ತ ಮಾಲೆ...... !ಕನಸು ಹೆಣೆಯುತಲಿಹವುಮುಸ್ಸಂಜೆ ಬಾನಾಡಿಗಳು
ತಾರೆಗಳು ನಗುತಿಹವು
ಮನಸು ಬಿಚ್ಚಿ.......!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)








