ನವಿಲಂತೆ ದಿನಾಂಕ : ೨೮/೧೨/೨೦೧೦
ಕನಸುಗಳು ಗರಿಗೆದರಿವೆ ನವಿಲಂತೆ
ಸಾವಿರ ಸಾವಿರ ಕಂಗಳಲ್ಲಿ
ಚಣಕೊಂದೊಂದು ಹೊಳಪು
ಕಾರ್ಮೋಡಗಳ ಕಂಪನಕೆ
ಭರವಸೆಯ ಹೆಜ್ಜೆ!
ಚದುರಿದ ಸೊಬಗು, ಹುರುಪು, ಮೆರಗು
ಹೊಸವರುಷದ ಹೊಸಿಲಲ್ಲಿ
ನಾನೂ ಕೂಡ ಗರಿಗೆದರಿದ ನವಿಲಂತೆ.....
ನಲಿವು ಓಲೆ ಬರೆದಿದೆ
ಕಣ್ಣಂಚಿನ ಕುಂಚ ಬಳಸಿ,
ಮನದ ಬಣ್ಣ ಕಲೆಸಿ
ಕಳೆದ ಕಾಲ ಸ್ಮರಿಸಿ!!
ಬಿದ್ದ ಗರಿಯಂತೆ .....
ನೂರು ನೆನಪುಗಳು ;
ನವಿಲಿಗೂ, ಆರಿಸಿಕೊಂಡ ಹಸ್ತಗಳಿಗೂ.....
ಹೊಸವರುಷದ ಹೊಸಿಲಲ್ಲಿ
ನಾನೂ ಕೂಡ ಗರಿಗೆದರಿದ ನವಿಲಂತೆ......