ಸೋಮವಾರ, ಜೂನ್ 6, 2011

ಪೂರ್ಣ ಪ್ರಮಾಣದ ಇಮೇಜ್ ಅನ್ನು ನೋಡಿ
ಬೃಂದಾವನ                                                                                                                          

ನೀಲಿ ಇರುಳಿನ ಮೂಹ ಚಂದ್ರಿಕೆ
ಕನಸ ಕಾವ್ಯದ ಕನ್ನಿಕೆ !
ತಾರೆ ಮೆರುಗಿನ ಹೊಳೆವ ಚೇತನ
ತೃಪ್ತ ಭಾವ ಭವಾನ್ಗನಾ...

ಚಿಗುರ ಚೈತ್ರದ ಶಾಂತ ನಾದಕೆ
ಸೂಕ್ಷ್ಮ ಆಶಯ ಅನುದಿನಾ...
ಭಾಗ್ಯ ದೀಕ್ಷೆಯ ಸೃಷ್ಟಿ ಮಾಯೆಗೆ
ನೇಹ ನೇಗಿಲು ತನು ಮನ...

ಭುವಿಯು ಅಣಿಯಿದೆ ಮುತ್ತ ಪೊಣಿಸಲು
ಮನದ ಮೇಘದ ಸಂಭ್ರಮ...
ನೂರು ನಯನದಿ ನವಿಲ ನರ್ತನ
ಹೊನ್ನ ಕೊರಳಿನ ಹೂಬನ...

ಕೂಗಿ ಕರೆವ ಬೃಂದಾವನ...
ತೂಗಿ ತೊನೆವ ಲತೆ ಭಾವನಾ...
ಭುವಿಯಿಹಳು ತಂತಾನೇ!!!

ಶಿಶಿರನವತಾರವೇ   ಹೀಗೆ,
ಎಲ್ಲೆಲ್ಲು ಬರಿ ಬಯಲು
ಅದೆಂತೆಂಥ ಕಲ್ಪನೆಯೋ  
ಜಗದ ತುಂಬಾ..

ಭುವಿಯಿಹಳು ತಂತಾನೇ
ನಸುನಗುತ ಸೋಜಿಗದೊಡನೆ
ತಿಳಿದಿಹುದಲ್ಲ  ಆಕೆಗೆ
ಪ್ರತಿ ನಮೂನೆ???!!


ಮನವೆಲ್ಲ ಬರಿ ನೀಲಿ
ನಿರಾಷೆಯಳಲಿನ ಮೌನ..
ಬೆರಳು ಮಾಡಿವೆ ಮೇಲೆ
ಮರಗಳೆಲ್ಲಾ...


ಚಿಗುರ ಕಾಯುತಲಿಹವೋ!
ವರವ  ಬೆಡುತಲಿಹವೋ!
ಚಿತ್ರ ವೈಚಿತ್ರ್ಯದ ನೃತ್ಯ ಭಂಗಿ !!

ಚೈತ್ರ ಬರುವಳು ನಾಳೆ
ಹೊತ್ತು ತರುವಳು ಹಸಿರ 
ಹಸಿವ ನೀಗುವ ಸುಧೆ,
ಮುತ್ತ ಮಾಲೆ...... !ಕನಸು ಹೆಣೆಯುತಲಿಹವು
ಮುಸ್ಸಂಜೆ ಬಾನಾಡಿಗಳು
ತಾರೆಗಳು ನಗುತಿಹವು
ಮನಸು ಬಿಚ್ಚಿ.......!